ಇದು ಕಂದಲ್ಲಿ ಹೊಳೆಯಲ್ಲಿ ಬರುವ ಅತಿ ದೊಡ್ಡ ಜಲಪಾತ ಸುಮಾರು ನೂರು ಅಡಿ ಅಸ್ಟು ಎತ್ತರದಿಂದಾ ಬೀಳುತ್ತಿದೆ ಇಲ್ಲಿ ಹೆಚ್ಹಾಗಿ ಅಗಸ್ಟನಿಂದ ಮಾರ್ಚ್ ವರೆಗೆ ತುಂಬಾ ನೀರುಇರುತ್ತದೆ ಆಮೇಲೆ ಸ್ವಲ್ಪ ಕಡಿಮೆಯಾಗುತ್ತದೆ ಆದರು ಮಳೆಗಾಲ ಬರುವವರೆಗೂ ನೀರು ಇರುತ್ತದೆ (ಇದು ಮೇ ಕೊನೆಯಲ್ಲಿ ತೆಗೆದ ಪೋಟೋ)
"ಕನ್ನದಲ್ಲಿ ಫಾಲ್ಸ್"
ಇದು ಯಾಣಾ ಗ್ರಾಮದಿಂದಾ 6k.m ಇದ್ದು ನಡೆದೇ ಹೋಗಬೇಕು. ದಟ್ಟವಾದ ಕಾಡಿನ ಮದ್ಯೆ ಈ ಜಲಪಾತ್ ವಿದ್ದು ನೋಡಲು ಅದ್ಭುತವಾಗಿದೆ.
ನಾನು ವಿನು ಹೆಗಡೆ.ನನ್ನ ಊರು ಯಾಣಾ.ನಾನು ಇರೋದು ಅಲ್ಲೇ ,ಸದ್ಯಕ್ಕೆ B.S.N.L.Telephone ಲ್ಲಿ ಕೆಲಸ ಮಾಡ್ತಾ ನನ್ನದೇ ಅದ ಒಂದು ಗೆಸ್ಟ್ ಹೌಸ್ ಮಾಡಿ ನಮ್ಮ ಉರಲ್ಲೇ ಇದ್ದ ಎರಡು ಜಲಪಾತಗಳಿಗೆ ಚಾರಣ ನಡೆಸುತ್ತಿದ್ದೇನೆ.ನಾನು ಗೆಸ್ತ ಹೌಸ್ ಮಾಡಲು ಕಾರಣ ಯಾಣಾ ಒಳ್ಳೆ ಪ್ರವಾಸಿತಾಣವಾಗಿದ್ದು ತುಂಬಾ ಜನರು ಬಂದುಹೊಗುತಿದ್ದಾರೆ.ಇಲ್ಲಿ ಯಾವುದೇ ವಸತಿ ವ್ಯವಸ್ತೆ ಇಲ್ಲವಾಗಿದೆ.ಈ ವರ್ಷದಿಂದ ಇದನ್ನು ಆರಂಬಿಸಿದ್ದೇನೆ.ಇಲ್ಲಿ ಎರಡು ಜಲಪಾತಗಲಿದ್ದು ನೋಡಲು ಅದ್ಭುತವಾಗಿದೆ.(1,ವಿಭೂತಿ ಜಲಪಾತ 2,ಕಂದಲ್ಲಿ ಜಲಪಾತ)